ವರ್ಡ್ಸ್ವರ್ತ್, ವಿಲಿಯಂ
	1770-1850. ಶ್ರೇಷ್ಠ ಇಂಗ್ಲಿಷ್ ರೊಮ್ಯಾಂಟಿಕ್ ಕವಿ. ಕಂಬರ್‍ಲೆಂಡ್‍ನ ಕಾಕರ್‍ಮೌತ್‍ನಲ್ಲಿ 1770ರಲ್ಲಿ ಜನಿಸಿದ. ಚಿಕ್ಕ ವಯಸ್ಸಿನಲ್ಲಿಯೇ ತಾಯಿ-ತಂದೆಯರನ್ನು ಕಳೆದುಕೊಂಡು ಬಂಧುಗಳ ಬಳಿ ಬೆಳೆದು, ವಿದ್ಯಾಭ್ಯಾಸ ಮಾಡಬೇಕಾಯಿತು.

	ಸ್ಯಾಮ್ಯುಯಲ್ ಟೇಲರ್ ಕೋಲ್‍ರಿಜ್‍ನೊಂದಿಗೆ ಸ್ನೇಹ ಬೆಳೆಸಿ ಅವನೊಂದಿಗೆ ಸೇರಿ ಇಂಗ್ಲಿಷ್ ಯುಗಾರಂಭ ದಲ್ಲಿ ಬಹಳ ಪ್ರಸಿದ್ಧಿ ಪಡೆದಿರುವ ಲಿರಿಕಲ್ ಬ್ಯಾಲೆಡ್ಸ್ ಎಂಬ ಹೊಸ ಕವಿತಾ ಸಂಕಲನವನ್ನು ಪ್ರಕಟಿಸಿದ. ಇದರ ಎರಡನೆಯ ಆವೃತ್ತಿಯ ಮುನ್ನುಡಿ (1800)  ವಿಮ ರ್ಶೆಯ ವಲಯದಲ್ಲಿ ಎ ಪ್ರಿಫೇಸ್ ಟು ದ ಲಿರಿಕಲ್ ಬ್ಯಾಲೆಡ್ಸ್ ಎಂಬ ಶೀರ್ಷಿಕೆಯಿಂದ ಹೊಸ ಕಾವ್ಯಮಾರ್ಗದ ರೀತಿನೀತಿಗಳನ್ನು ಕುರಿತಂತೆ ಅತಿ ಮುಖ್ಯ ದಾಖಲೆ ಬರೆಹವಾಗಿ ಪ್ರಸಿದ್ಧಿ ಪಡೆಯಿತು. ಈ ಕೃತಿಯಲ್ಲಿನ ಕವನಗಳು ಸಾಮಾನ್ಯ ಮನುಷ್ಯನ ಬದುಕಿನ ವಸ್ತು ಹಾಗೂ ಭಾಷೆಗಳನ್ನು ಒಳಗೊಂಡು ಬದುಕಿಗೆ ಅತಿ ಹತ್ತಿರವಾಗಿವೆ. ಇದರಲ್ಲಿ ಇವನು ಹೇಳುವ ಇಮೋಷನ್ಸ್ ರೀಕಲೆಕ್ಟೆಡ್ ಇನ್ ಟ್ರ್ಯಾಂಕ್ವಿಲಿಟಿ ಎಂಬುದು ಘೋಷ ವಾಕ್ಯದಂತೆ ವಿಮರ್ಶನ ಕ್ಷೇತ್ರದಲ್ಲಿ ಕೆಲಸ ಮಾಡಿತು. ಇಲ್ಲಿಯ ಇಂತಹ ಹಲವಾರು ಮಾತುಗಳು ಕವಿಯನ್ನು ಸಾಮಾನ್ಯನೊಂದಿಗೆ ಆಪ್ತಗೊಳಿಸುವ ಕ್ರಿಯೆಗೆ ಬದ್ಧವಾಗಿ ಕಾವ್ಯವನ್ನು ಕುರಿತಂತೆ ಕಾವ್ಯಾರಾಧಕರ ಮನಸ್ಸಿನಲ್ಲಿ ಒಂದು ಭಿನ್ನ ಮಾರ್ಗವನ್ನೇ ಹುಟ್ಟುಹಾಕಿದುವು.

	ಈತ ಪ್ರಕೃತಿ ಪ್ರಿಯಕವಿ. ಮಾನವನ ಮನಸ್ಸು ಕವಿತೆಗಳ ಒಳಸೂತ್ರ. ಲೂಸಿ (1798-99), ಪ್ರಿಲ್ಯೂಡ್ಸ್ ಮೈಕೇಲ್ (1800), ರೆಸಲ್ಯೂ ಷನ್ ಆ್ಯಂಡ್ ಇಂಡಿಪೆಂಡೆನ್ಸ್ (1802) ಹಾಗೂ ದ ಸಾಲಿಟರಿ ರೀಪರ್ (1807) ಇವು ಇವನ ಪ್ರಮುಖ ಕಾವ್ಯಗಳು.

	ಕೇಂಬ್ರಿಜ್ ವಿಶ್ವವಿದ್ಯಾಲ ಯದಲ್ಲಿ ವ್ಯಾಸಂಗ ಮಾಡುವ ಸಂದರ್ಭದಲ್ಲಿ, ಫ್ರೆಂಚ್ ಕ್ರಾಂತಿಯ ಆಗುಹೋಗುಗ ಳನ್ನು ಗಮನಿಸುತ್ತಲೇ ಬೆಳೆದ ಇವನು ತಾರುಣ್ಯದಲ್ಲಿ ವಿಶಾಲ ಮನೋಭಾವನೆಯಿಂದಿದ್ದರೂ ಕಾಲ ಕಳೆದಂತೆ ರಾಜಕೀಯವಾಗಿ ಹಾಗೂ ಧಾರ್ಮಿಕವಾಗಿ ಸಂಪ್ರದಾಯವಾದಿಯಾದ. 1843ರಲ್ಲಿ ಆಸ್ಥಾನ ಕವಿ ಎಂಬ ಗೌರವಕ್ಕೆ ಪಾತ್ರನಾದ. ಎಲಿಜಿಯಾಕ್ ಸ್ಟಾಂeóÁಸ್ ಸಜೆಸ್ಟೆಡ್ ಬೈ ಎ ಪಿಕ್ಚರ್ ಆ¥sóï ಪೀಲ್‍ಕ್ಯಾಸಲ್ (1806), ಟಿಂಟರ್ನ್ ಅಬೆ (1807), ದ ಪ್ರಿಲ್ಯೂಡ್ (1850) ಮೊದಲಾದ ಕವಿತೆಗಳು ಇವನನ್ನು ಕಾವ್ಯ ಪ್ರಪಂಚದಲ್ಲಿ ಮಿನುಗುತಾರೆಯಾಗಿಸಿದವು. ಇವನು ಸು.523 ಸಾನೆಟ್‍ಗಳನ್ನು ಬರೆದಿದ್ದಾನೆ.	
					

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ
							(ಜಿ.ಎನ್.ಎಸ್.)